Wednesday, January 20, 2021

ಕೇಳಿದಳವಳು...


ಚುಮು ಚುಮು ಚಳಿಯಲಿ ಮುಪ್ಪಡರಿ ನಡುಗುವ 
ಶರೀರಕೆ ಶಾಲು ಹೊದ್ದಾಕೆಯ ಬಳಿ 
ಊರುಗೋಲೂರಿ ಕಾಲೆಳೆಯುತ್ತ ಬಂದು,
ಕೆದರಿದ ಬಿಳಿ ಕೂದಲ ಮುಡಿಗೆ ಬಿಳಿಯ ಹೂವ ಮುಡಿಸುವ ಅವಸರದಲ್ಲಿದ್ದವನನು ದಪ್ಪ ಕನ್ನಡಕದ ನಡುವಲಿ ಗುಡ್ಡೆಗಣ್ಣು ಬಿಟ್ಟು ಕೇಳಿದಳವಳು....
"ಈ ಚಳಿಲಿ ಆಚೆ ಹೋಗುವಂಥದ್ದು ಏನಿತ್ತು...?"
ಅವರವರ ಪ್ರೀತಿ, ವ್ಯಕ್ತ ಪಡಿಸುವ ರೀತಿ ಅವರವರದ್ದು!!!

-ಪಲ್ಲವಿ 

ಕರಗುವೆ...