Monday, April 26, 2021

ಭಾವ ಬೆರೆತು ಜಗವ ಮರೆತು...


ನಿಟ್ಟುಸಿರೊಂದು ಪಿಸುನುಡಿದಿದೆ ನಿನ್ಹೆಸರ ಮುಗುಳ್ನಗೆಯಲಿ....
ಮೌನದಾಸರೆಯಲಿ ಹಾಡಿದೆ ಎದೆಯರಾಗ  ಬಿಸಿಯುಸಿರ ಹಿಮ್ಮೇಳದಲಿ ..
ಉಸಿರ ಲಯಕೆ ನರ್ತಿಸಿದೆ ಮನ ಎರಡೊಂದಾಗಿ..
ಭಾವ ಬೆರೆತು ಜಗವ ಮರೆತು ಘಮವೆಲ್ಲಾ ಹರಡಿದೆ ಹೂವಾಗಿ🌼🌼🌼

Saturday, April 24, 2021

ಚಹಾ ಗುಟುಕಿಸಿ..


ಆವಿಯಾಗುವ ಮುನ್ನ
ಹೆಸರ ಚಿತ್ತಾರ ಬರೆಯುವ ಬಾ
ಹನಿಚುಕ್ಕಿಗಳ ಜೋಡಿಸಿ..
ಖಾರ ಮಿರ್ಚಿಯ ಜೊತೆಗೆ
ಚಹಾ ಗುಟುಕಿಸಿ...
-ಪಲ್ಲವಿ 

Friday, April 23, 2021

ಬಾರದಿರುವೆಯಾ...

ಗೆಳೆಯಾ,
ಇಂದಿನಿರುಳ ಗರ್ಭವು ಆರ್ಭಟಿಸುತಿರೆ,ತಲ್ಲಣವು ಒಳಗೊಳಗೆ..
ಕೋಲ್ಮಿಂಚು ಕಣ್ಣ ಸೀಳುವಾಗ ಕೋಲಾಹಲ ಎಲ್ಲೆಲ್ಲೂ..
ಬಾರದಿರುವೆಯಾ ಕರೆದರೆ..
ಜೋಡಿ ಮೋಡಗಳೊಡನೆ ಧರೆಗಿಳಿದು,
ಮಳೆಯೊಡನೆ ಮಳೆಯಾಗಿ,
ಮಣ್ಣ ಘಮವಾಗಿ,
ಚಿಗುರಂಚಲಿ ನಾಚಿ ನಗುವ ಹನಿಯಾಗುವ ಬಾ...
-ಪಲ್ಲವಿ 

ಮುಸ್ಸಂಜೆಯ ಬೆಂಗಳೂರ...

ದಿನವಿಡೀ ದುಡಿದು ದಣಿದು ಗೂಡು ಸೇರುವ ತವಕದಲಿ ಸವಾರ...
ದಿನದ  ದುಡಿಮೆಗೆ ಬೆಳಕಾಗಿ ನಿಂತು,ತಂಪು ಮೋಡದಲಿ ಕರಗುವ ಹುನ್ನಾರದಲಿ ನೇಸರ...
ನೀ ನೋಡ ರಂಗು ರಂಗಿನ ಮುಸ್ಸಂಜೆಯ ಬೆಂಗಳೂರ...
- (ಚಿತ್ರ & ಸಾಲು)
ಪಲ್ಲವಿ 😊

Sunday, April 11, 2021

ಮತ್ತೆ ಮಗುವಾಗುತಿರುವೆ

ಮತ್ತೆ ಮಗುವಾಗುತಿರುವೆ....
ನಿನ್ನೊಡನಾಟಡಿ
ಮತ್ತದೇ ಆಟ ಕಾಟಗಳತ್ತ ಒಲವು..
ಈ ಪಯಣದ ಉಯ್ಯಾಲೆಯಲಿ ಎರಡ್ಹೆಜ್ಜೆ ಹಿಂದೆ ಜೀಕೋಣ..
ಬಾನೆತ್ತರಕ್ಕೇರೋಣ..

ಬರುವೆ ಗೆಳೆಯ ತೋಳಿಗೆ ಜೋತುಬೀಳಲು..
ಹುಸಿಮುನಿಸ ತೋರಲು..
ಕಳ್ಳತನವ ಮಾಡಲು..
ನಿನ್ನ ಕೈ ಹಿಡಿಯಲು...
ಮತ್ತೆ ಬರುವೆ ಗೆಳೆಯ,
ನಿನ್ನೊಡನಾಟಡಿ ಮಗುವಾಗಲು... 
-ಪಲ್ಲವಿ 

ಕರಗುವೆ...