Wednesday, September 29, 2021

ಬೆಳಗು


ತನ್ನ ಗೂಡಲಿ ಬೆಚ್ಚಗಿನ ಬಿಸುಪಿಗೆ ಕಣ್ಮುಚ್ಚಿದ ಹಕ್ಕಿಯೊಂದು
ಬುರ್ರನೆ ಬಂದ ಗಾಡಿಯ ಸದ್ದಿಗೆ ಬೆಚ್ಚಿ ಚಿಲಿಪಿಲಿ ಎನ್ನುತಾ
ಪಟಪಟನೆ ರೆಕ್ಕೆ ಬಡಿದು ಹಾರುವಾಗ,
ಒಣ ಎಲೆ ನೆಲಕಂಡು, ಚಿಗುರೆಲೆ ದಡಬಡಿಸಿದಾಗ...

ಶುಭ್ರ ನೀಲ ಗಗನದಿಂದ ಬೆಳ್ಮೋಡವೊಂದು ಇಣುಕಿ, ಮುದ್ದಿಸಿ ನಾನಿರುವೆ ನಿನ್ನೊಡನೆ ಎಂದಿತು....
ಎಳೆ ಬಿಸಿಲಿಗೆ ಮಿಂಚಿ ನಾಚಿದ ಹಸಿರು, ಕಂಪಿಸಿತು...

-ಚಿತ್ರ, ಸಾಲು
ಪಲ್ಲವಿ 

Sunday, September 5, 2021

ದಶಕದ ದಾರಿ

ದಶಕದ ದಾರಿ...
ಸುಲಭವೆನಿರಲಿಲ್ಲವೇ ಗೆಳತಿ..
ನೀ ಜೊತೆಯಿರದಿದ್ದರೆ..
ನಗುವಲ್ಲಿ ನಗುವಾಗಿ,
ಅಳುವಾಗ ಭುಜವಾಗಿ,
ಮುನಿಸಲಿ ಮೌನವಾಗಿ,
ನನ್ನ ನಂಬಿಕೆಯಾಗಿ,
ಎಲ್ಲ ಕ್ಷಣಗಳಿಗೆ ಸಾಕ್ಷಿಯಾಗಿ,
ಜೊತೆಯಾಗಿ ನಿಂತವಳೇ...
ನೀ ಜೊತೆಯಿರದಿದ್ದರೆ...
ದಶಕದ ದಾರಿ...
ಸುಲಭವೇನಿರಲಿಲ್ಲವೇ ಗೆಳತಿ..

-ಪಲ್ಲವಿ

Thursday, September 2, 2021

ನೀ ಎನ್ನ ಕೃಷ್ಣನೇ...

ಕಡೆದ ಬೆಳ್ಮುದ್ದೆಯಿಂದ ನುಸುಳಿ
ಕಡಗೋಲ ತುದಿಯಲಿ ಅಡಗಿ ಕುಳಿತ ನಯದಷ್ಟೇ ನವಿರಾಗಿ
ಇರುವ ಪ್ರೇಮವದು...
ತಿಕ್ಕಿ ತಿದ್ದಿ ತೀಡಿದರೂ ಬಿಡಲೊಲ್ಲದು..
ಸ್ಪರ್ಶವಿರದಿರೆ ಭಾವ ಮಿಡಿಯದು..
ನೀ ಎನ್ನ ಕೃಷ್ಣನೇ ..
ನಾನೊಮ್ಮೆ ಯಶೋದೆ...
ಮತ್ತೊಮ್ಮೆ ರಾಧೆ..
ಇನ್ನೊಮ್ಮೆ ಭಾಮೆ..
ಒಮ್ಮೊಮ್ಮೆ ಮೀರಾ...

-ಪಲ್ಲವಿ

ಕರಗುವೆ...