Saturday, March 27, 2021

ನಗು...

ಒಡೆದ ಕನ್ನಡಿಯೂ ಖುಷಿಯಾಗಿದೆ ಅವಳ ಕೈಲಿ...
ತುತ್ತು ಅನ್ನಕ್ಕೂ ಹಸಿವು ನೀಗಿದೆ ಇವಳ ಕೈಲಿ... ಲೋಕದ ಸಂತಸವನೆಲ್ಲ ತನ್ನ ನಗುವಲ್ಲಿ ಹಿಡಿದು, ಕಂಗಳಲ್ಲಿ ಮುಚ್ಚಿಟ್ಟ ಪುಟ್ಟ ಪೋರಿ..
ಹರಕು ಚಾಪೆ ಇರಲಿ, ಬಿದಿರ ಮಂಚವಿರಲಿ,
ಸೋರುವ ಮಾಳಿಗೆಯಿರಲಿ, ಬಣ್ಣ ಮಾಸಿದ ಬಟ್ಟೆಯಿರಲಿ...
ನಗುವಿಗಿಂತ ಹಿರಿದಾದ ಆಡಂಬರ ಬೇಕಿಲ್ಲ!

 ಭುವಿ ಎಂಬ ಬಹುದೊಡ್ಡ ರಂಗಮಂಚದ ಪುಟ್ಟ ಕಲಾವಿದರು.. ಬದುಕು ನಗುವಷ್ಟೇ ಹಸನಾಗಿರಲಿ...

-ಪಲ್ಲವಿ 

No comments:

Post a Comment

ಕರಗುವೆ...