Saturday, June 13, 2020

ನೆನಪಿದೆಯಾ ನಿನಗೆ...


ನೆನಪಿದೆಯಾ ನಿನಗೆ
ಹೊಂಗೆಮರದ ಕೊಂಬೆಗೆ
ಉಯ್ಯಾಲೆ ಕಟ್ಟಿದ್ದು..
ನಾವಿಬ್ಬರೂ ತಾಕಿ ಕುಳಿತಿದ್ದು..
ನಿನ್ನ ದನಿಗೆ ನಾ ಕರಗಿದ್ದು..
ನನಗರಿವಿಲ್ಲದ ನಗುವ
ನೀ ಕದ್ದು ನೋಡಿದ್ದು..
ನಮ್ಮ ನೋಡಿ ಚಂದಿರನೂ
ಮೋಡದೊಳಗೆ ಜಾರಿದ್ದು...

ಅಲ್ಲಿಯವರೆಗೆ ಎಲ್ಲವೂ
ಮಧುರ, ಮನೋಹರವಾಗಿಯೇ ಇತ್ತು..
ಮೋಡದೊಳು ಹೊಕ್ಕ ಚಂದಿರ
ಇನ್ನೂ ಆಚೆ ಬಂದಿಲ್ಲ..
ಕಾಯುತಿಹೆ ಅದೇ ಉಯ್ಯಾಲೆಯ
ಮೇಲೆ ಕೂತು ಒಂಟಿಯಾಗಿ..
ಎಲ್ಲ ನೆನಪುಗಳ ಹೊರಚೆಲ್ಲುತ್ತಾ.. 

No comments:

Post a Comment

ಹೆಣ್ಣು