Saturday, June 13, 2020

ಆವರಿಸು ನನ್ನೊಮ್ಮೆ...


ಕೇಳುತಿಹುದು ನಿನ್ನ ದನಿ
ಇನ್ನೆಷ್ಟು ಗುಡುಗುವೆ?
ಅರ್ಥವಾಗಿದೆ ಎನಗೆ
ದೂರ ನಿಂತಿಹೆ ಏಕೆ?
ನಿನ್ನ ಸನಿಹವ ಬಯಸಿ,
ಮುಂಗುರುಳು ಸವರಿಹುದು ಕೆನ್ನೆಯ..
ಎದುರಿಸಲಾರೆ ಆ ನೋಟವಾ..

ಅರಿವಾಗುತಿದೆ ನಿನ್ನಾಗಮನ
ಈ ತಂಗಾಳಿಯಲಿ,
ಆ ಮಣ್ಣಿನ ಸುಗಂಧದಲಿ..
ಇನ್ನೂ ಏಕೆ ಕಾಯಿಸುವೆ ಎನ್ನ
ಬಂದುಬಿಡು ನೀನೊಮ್ಮೆ
ಕರಿಮೋಡದೊಳಗಿಂದ ಧುಮುಕಿ
ಮೊದಲ ಹನಿಯಾಗಿ, ತುಂತುರುವಾಗಿ,
ಜಡಿಮಳೆಯಾಗಿ, ಭೋರ್ಗರೆದು
ಆವರಿಸು ನನ್ನೊಮ್ಮೆ...

No comments:

Post a Comment

ಹೆಣ್ಣು