Saturday, June 13, 2020

ಧೀರ

ಕತ್ತಲಾಗಸದಿ ಅತ್ತ ನೋಡಿದರೆ 
ಚಿತ್ತ ಹರಿವುದು ನಿನ್ನ ಸುತ್ತ
ಎತ್ತ ತಿರುಗಲಿ ಇನ್ನೆಂತು ಕಾಣಲಿ
ತೋರುಬೆರಳ ತುತ್ತ ತುದಿಯ ಭರವಸೆಯಲಿ...

ಧಗಧಗನೆ ಸುಡುತಿಹ ಉರಿ ಬಿಸಿಲಲಿ
ನಿನ್ನ ಪಾದ ಧೂಳಿಯಿರದೆ
ದಾರಿಗೆ ಮಂಕು ಕವಿದಿಹುದು;
ಧೀರನಿವ ಬರುವನೆಂದು ಮನ ಕಾಯುತಿಹುದು...

ಇಂದು ಯುದ್ಧವಂತೆ,
ನೀನು ಮುನ್ನುಗ್ಗುವ ಯೋಧನಂತೆ
ಮನದಲ್ಲೊಂದು ಅಳುಕೆನಗೆ
ಮಸಣ ಮೌನ ಮನೆಯೊಳಗೆ...
ನಿನ್ನ ಮತ್ತೆ ಕಾಣುವ ಭಾಗ್ಯವಿರದಿದ್ದರೆ
ಈ ಕಣ್ಣುಗಳು ಬರಡಾಗುವ ಅಂಜಿಕೆಯೆನಗೆ...

ಗಡಿ ಕಾಯುವ ಧೀರ ನೀನು;
ನಿನ್ನ ಕಾಯುತಿಹ ಧೀರಳು ನಾನು
ಯುದ್ಧದ ಜೈಕಾರ ದೇಶದೆಲ್ಲೆಡೆ ಮೊಳಗುತಿದೆ
ನನ್ನೊಳಗಿನ ಹೋರಾಟ ಯಾರಿಗೂ ಕಾಣದೇ..?

(ನನ್ನ ನಾಲ್ಕಕ್ಷರಗಳ ಮೂಲಕ ದೇಶ ಕಾಯುತ್ತ ಗಡಿಯಲ್ಲಿರುವವಗೆ ನಮಿಸುವೆ. ಅವನ ಕಾಯುತ್ತಿರುವ ಜೀವಕ್ಕೆ ಅರ್ಪಿಸುವೆ.)

No comments:

Post a Comment

ಹೆಣ್ಣು