Thursday, June 17, 2021

ಪಾರಿ


ಬಾ, ಕಾಯುತಿರುವೆ ನಾನಿಲ್ಲೇ...
ಎಳೆ ಬಿಸಿಲು ನವಿರಾಗಿ ಧರೆಯ ಸ್ಪರ್ಶಿಸುವಲ್ಲಿ
ಮೋಡ ಮುನಿಸ ತೊರೆದು ಹಸಿರಿಗೆ ಮುತ್ತಿಕ್ಕುವಲ್ಲಿ
ಎಲೆ ತಲೆದೂಗಿ ಪಿಸುಗುಡುವಲ್ಲಿ
ಅರಳಿ ಘಮಿಸಿದ ಪಾರಿ, ಹಗಲು ನಾಚಿ,
ಹೊರಟು ನಿಂತ ಗಳಿಗೆಯಲಿ.....
ಕಾಯುತಿರುವೆ ನಾನಿಲ್ಲೇ...
ನಿನ್ನ ಪಾರಿಯಾಗಿ...

-ಪಲ್ಲವಿ 

No comments:

Post a Comment

ಕರಗುವೆ...