ಮನದೊಳಗಿನ ಸಾವಿರ ಬಣ್ಣಗಳಲ್ಲಿ ಲೇಖನಿ ಎಂಬ ಕುಂಚವ ಅದ್ದಿ ಕನಸಿನ ಲೋಕದ ಚಿತ್ತಾರವ ಮೂಡಿಸುವ ಬಯಕೆ ಹೊತ್ತ ಹಸಿರೂರ ಹುಡುಗಿ ನಾನು..
Friday, July 31, 2020
ವ್ಯಾನಿಟಿ ಬ್ಯಾಗು..
ಮತ್ತೆ ಕಾಡಿದ ಮಳೆಯ ನೆನಪು - 4
Thursday, July 30, 2020
ಅಘನಾಶಿನಿಯವಳು..
ಕುರುಹು..
Wednesday, July 29, 2020
ಯಾರು ನೀನು..??
Monday, July 27, 2020
ನಿನ್ನ ಅರಸುತಿವೆ..
ನಿರೀಕ್ಷಿತ....
Sunday, July 26, 2020
ಹೇಗೆ ಸಂತೈಸಲಿ..
ವಸುಂಧರೆ ಪ್ರೇಮಿಸಿಹಳು..
ಹೆಜ್ಜೆಗೆ ಹೆಜ್ಜೆ...
ಮತ್ತೆ ಕಾಡಿದ ಮಳೆಯ ನೆನಪು - 3
Saturday, July 25, 2020
ನಿನ್ನ ನೆನಪಿಸಿದೆ..
Friday, July 24, 2020
ಯಾವುದೀ ಹಾದಿಯು...
Thursday, July 23, 2020
ಹಬ್ಬಿದ ಲತೆಯ ನೋಡುತ್ತಾ..
ನಿನಗಾಗಿ..
Wednesday, July 22, 2020
ಜೋಗ.. ಕನಸುಗಳ ಆಗರ..
ಜೋಗ.. ಕನಸುಗಳ ಆಗರ..
ಪ್ರತಿ ಮಳೆಗಾಲದಲ್ಲಿಯೂ ಜೋಗಕ್ಕೊಂದು ಭೇಟಿ ಇದ್ದೇ ಇರುತ್ತದೆ. ಪ್ರತಿ ಭೇಟಿಯೂ ಅವಿಸ್ಮರಣೀಯ.
ಒಮ್ಮೆ ಧಾರೆ ಕಾಣದು. ಮತ್ತೊಮ್ಮೆ ದಾರಿಯೇ ಕಾಣದು. ಒಮ್ಮೊಮ್ಮೆ ನೀರ ರಭಸಕ್ಕೆ ಮಾತು ಕೆಳದು...
ಹಸಿರು ಕಾನನಗಳ ಮಧ್ಯೆ ಅಂಕು ಡೊಂಕಾಗಿ ವೈಯಾರದಿಂದ ಹರಿದು ಬರುವ ಶರಾವತಿ ರೌದ್ರ ರೂಪ ತಾಳಿ ಅಷ್ಟೆತ್ತರದಿಂದ ಧುಮುಕುವಾಗ ಎದೆ ಝಲ್ ಎನ್ನದಿರದು.. ಅವಳು ಧ್ವನಿಯಲ್ಲಿ ಅದೆಷ್ಟು ಶಕ್ತಿಯಿದೆ..
ಕಿಲೋಮೀಟರ್ ದೂರದಿಂದಲೂ ಅವಳ ಧ್ವನಿಯನ್ನು ಕೇಳಬಹುದು.
ಅದೆಷ್ಟು ಹೊಳೆಗಳು ಅವಳಲ್ಲಿ ಲೀನವಾಗುವುದೋ,ಎಷ್ಟು ಮಲಿನಗಳನ್ನು ಸಹಿಸಿಕೊಂಡು ಜೀವಜಲವಾಗಿದ್ದಳೋ...!! ಅದೆಷ್ಟು ಕಾಡು ಮೇಡುಗಳನ್ನಲೆದು, ಗುಡ್ಡ ಬೆಟ್ಟವ ದಾಟಿ, ಬಂಡೆಗಳಿಗೆ ಧೈರ್ಯದಿಂದ ಎದೆಯೊಡ್ಡಿ ಮುನ್ನುಗ್ಗುತ್ತಿರುವಳು..
ಅಲ್ಲೆಲ್ಲೋ ಕಟ್ಟೆ ಕಟ್ಟಿ, ಮತ್ತೆಲ್ಲೋ ಶರಾವತಿ ತನ್ನನ್ನು ಮುಳುಗಿಸಿದಳು ಎಂಬ ಮನುಷ್ಯನಿಗೆ ಶರಾವತಿಯ ಅಂತರಾಳದ ದನಿ ಕೇಳಿಸಲೇ ಇಲ್ಲ..!
ಜೋರು ಮಳೆಗಾಲದಲ್ಲಿ ಶರಾವತಿ ತನ್ನ ಬಿಳುಪನ್ನು ಕಳೆದುಕೊಳ್ಳುತ್ತಾಳೆ. ಆದರೆ ಹೊಳಪನ್ನಲ್ಲ..
ಧಾರೆಗಳೆಲ್ಲ ರಣಗೆಂಪು...!
ರಾಜ, ರಾಣಿ, ರೋರರ್, ರಾಕೆಟ್ಗಳು ತಮ್ಮ ಮಕ್ಕಳು, ಮರಿಮಕ್ಕಳನ್ನು ಪರಿಚಯಿಸುತ್ತವೆ. ಆ ಸೊಬಗನ್ನು ನೋಡಲು ಎರಡು ಕಣ್ಣುಗಳು ಸಾಲದು..
ರಸ್ತೆಯ ಎರಡೂ ಬದಿಯಲ್ಲಿ ದಟ್ಟ ಹಸಿರು ಸ್ವಾಗತಿಸುತ್ತದೆ.ಒದ್ದೆ ನೆಲ, ಟಪ್ ಟಪ್ ಎಂದು ಬೀಳುವ ಹನಿ, ಉಪ್ಪು ಖಾರದ ಸೌತೆಕಾಯಿ, ಬಿಸಿ ಬಿಸಿಯಾದ ಜೋಳದ ಘಮ...ಆಸೆಯ ಹುಟ್ಟಿಸಲು ಇಷ್ಟು ಸಾಕು !! ಪ್ಲಾಸ್ಟಿಕ್ ಸೂರಿನಡಿ ನಿಂತು, ಮಳೆಗೆ ಭುಜವೊಡ್ಡಿ ನಿಂತ ಅಜ್ಜಿ ಜೋಳಕ್ಕೆ ಖಾರ ಹಚ್ಚುವಾಗ, ಪ್ರೀತಿಯಿಂದ ಸಿಹಿಯಾಗಿ ಮಾತನಾಡಿದಾಗ ಆಪ್ತವೆನಿಸುತ್ತಾಳೆ.
ಮಳೆ ಜೋರಾಗಿ ಸುರಿಯುತ್ತಿದ್ದರೆ ಎಲ್ಲರೂ ಓಡಿ ಹೋಗಿ ಒಂದೇ ಸೂರಿನಡಿ ನಿಂತಾಗ.. ಪರಿಚಯವಿಲ್ಲದ ಮುದ್ದು ಮಗುವೊಂದು ಮುಗುಳ್ನಗುತ್ತದೆ. ಮತ್ತೊಬ್ಬರು ಅಲ್ಲೇ ಪರಿಚಯವಾಗಿ, 'ನಮ್ಮ ಊರಿಗೂ ಬನ್ನಿ' ಎಂದು ಆತ್ಮೀಯವಾಗಿ ಸ್ವಾಗತಿಸುತ್ತಾರೆ.
ಅಲ್ಲೊಬ್ಬ ಹುಡುಗ, ಮತ್ಯಾರೋ ಹುಡುಗಿ ಕಣ್ಣಲ್ಲೇ ಮಾತನಾಡುವುದ ಕಂಡು ಮನದಲ್ಲೇ ನಕ್ಕಿರುತ್ತೇವೆ..!
ಕ್ಯಾಮೆರಾ ಕಣ್ಣಿಗೆ ಕಾಣುವ ಜೋಗವೇ ಬೇರೆ.. ಚಿತ್ರ ಮಾತ್ರವೇ ಅಲ್ಲಿ !!
ಭೇಟಿ ಕೊಟ್ಟಾಗ ಆಗುವ ಅನುಭವವಿದೆಯಲ್ಲಾ.. ಮನದಲ್ಲಿ ಅಚ್ಚಳಿಯದೇ ಮೂಡುವ ಚಿತ್ರವದು.. ಎಂದಿಗೂ ಮಾಸದು.
ನನ್ನ ಪಾಲಿಗೆ ಜೋಗ ಕೇವಲ ಜಲಪಾತವಲ್ಲ, ಒಮ್ಮೆ ಭೇಟಿಯಾಗಿ 'ವಾವ್' ಎಂದು ಉದ್ಗರಿಸಿದಾಕ್ಷಣ ಮುಗಿಯುವಂಥದ್ದು ಅಲ್ಲ..!
ಜೋಗ..ಕಥೆಗಳ ಸಂತೆ.. ಕನಸುಗಳ ಆಗರ..
ನಿನಗೆ ಹುಚ್ಚೆನಿಸಬಹುದು...
ಗೋಡೆಯ ಮೇಲಿನ ಬಿರುಕು...
ಧೂಳೊರೆಸಿದಂತೆ...
Monday, July 20, 2020
ಗೆಳೆಯಾ, ಬಂದುಬಿಡು..
Sunday, July 19, 2020
ಭರವಸೆ..
ಜಗದ ಮೊದಲ ಅಪರಾಧಿ..
Thursday, July 16, 2020
ಮಳೆ..
Tuesday, July 14, 2020
ಅಮ್ಮಾ..
ಎದುರು ನೀನೇ ಇರ್ಬೇಕು ಕಣೋ...
ಮತ್ತೆ ಕಾಡಿದ ಮಳೆಯ ನೆನಪು -2
Sunday, July 12, 2020
ಮತ್ತೆ ಕಾಡಿದ ಮಳೆಯ ನೆನಪು - 1
ಬದುಕು ದಾಳದಾಟ..
ಮಾತು ಮರೆತೇಬಿಡುತ್ತೀನಷ್ಟೇ...
Thursday, July 9, 2020
ಕವಿತೆ ನಾನು..
Wednesday, July 8, 2020
ಗೆಳೆಯಾ, ನೀ ಜೊತೆಗಿರದಿದ್ದರೆ...
Tuesday, July 7, 2020
ಶಾಲಾದಿನದ ಹುಳಿ-ಸಿಹಿ ನೆನಪು..!
Monday, July 6, 2020
ಹೇ ಅನಾಮಿಕ..
ಅಮ್ಮ ಕೂಗ್ತಿದ್ಲು..
"ಏನಾದ್ರೂ ಹುಚ್ಚು - ಗಿಚ್ಚು ಹಿಡಿದಿದ್ಯೇನೆ ನಿಂಗೆ? ಈ ಮಳೇಲಿ ಎಲ್ಲಿ ಓಡ್ತಿಯಾ?"
ಇದು ಹೊಸತೇನಲ್ಲ. ಪ್ರತಿ ಮಳೆಗಾಲದ ಹೊಸ ಮಳೆಗೂ ಅಮ್ಮನದು ಇದೇ ರಾಗ... ನಾನು ಓಡುತ್ತೇನೆ.. ಅವಳ ಮಾತನ್ನು ಅಲಕ್ಷಿಸಿ,..
ಗದ್ದೆ ಬಯಲಿನಲ್ಲಿ ಕುಣಿಯುತ್ತಿದ್ದೆ ಒಬ್ಬಳೇ.. "ಮಾಯದಂಥ ಮಳೆ ಬಂತಣ್ಣಾ.." ಎಂದು ಹಾಡುತ್ತಾ..
ಸೀರೆ - ರವಿಕೆ ಎಲ್ಲ ಒದ್ದೆ.
ಒದ್ದೆ ಕೂದಲಿನಿಂದ ಬೆನ್ನ ಮೇಲೆ ಇಳಿಯುವ ನೀರು ಕಚಗುಳಿ ಇಡುತ್ತಿತ್ತು. ಮುಂಗುರುಳ ನೀರು ಹಣೆಯ ಮೇಲೆ ಜಾರಿ, ಕೆನ್ನೆಯ ಮೇಲೆ ಹರಿದು, ಗಲ್ಲದ ಮೂಲಕ ಕೆಳಗಿಳಿಯುತ್ತಿತ್ತು. ನನ್ನ ಕುಣಿತಕ್ಕೆ ಪೃಕೃತಿಯೂ ಸಾಥ್ ನೀಡಿತ್ತೇನೋ.. ಗಾಳಿಗೆ ಮರಗಳೂ ತಲೆದೂಗಿದ್ದವು.
ಮಳೆ ಕಡಿಮೆ ಆಯ್ತಲ್ಲ ಅಂತಾ ನಿಂತಿದ್ದೆ ಹಳೇ ಮಾವಿನ ಮರದ ಕೆಳಗೆ. ಸೆರಗನ್ನು ಹಿಂಡಿಕೊಳ್ಳುತ್ತಾ.. ಎಷ್ಟು ಪೆದ್ದಿ ನಾನು ಮರದ ಹನಿಗಳು ಮತ್ತೂ ಒದ್ದೆ ಮಾಡುತ್ತಿದ್ದವು. ಸೀರೆ ಒಣಗಿಸುವ ವ್ಯರ್ಥ ಪ್ರಯತ್ನ..!
ನೀನದೆಲ್ಲಿಂದ ಬಂದೆಯೋ..ಈ ಸ್ಥಿತಿಯಲ್ಲಿ ನನ್ನ ನೋಡುತ್ತಿದ್ದೀಯಲ್ಲ.. ಸಂಕೋಚವಾಯ್ತು..
ಹತ್ತಿರ ಬರುವವರೆಗೆ ನಿನ್ನ ಮುಖ ನೋಡಿದ್ದೆನಷ್ಟೆ.. ಆಮೇಲೆ ನಿನ್ನ ಕೆಂಪು ಶರ್ಟು, ಕಪ್ಪು ಪ್ಯಾಂಟು, ಕರಿ ಬೂಟು, ಕುತ್ತಿಗೆಗೆ ನೇತು ಹಾಕಿದ ಕ್ಯಾಮರಾ.. ಛತ್ರಿ ಹಿಡಿದ ಎಡಗೈಲಿ ಕಂಡ ವಾಚು..
"ತಗೊಳ್ಳಿ ಇದನ್ನ.."
ನಿನ್ನ ಧ್ವನಿ ಕೇಳಿದ್ದೇ ಆಗ.. ನೀ ಕೊಟ್ಟಿದ್ದನ್ನು ತೆಗೆದುಕೊಳ್ಳುವಾಗ.. ನಿನ್ನ ಬಲಗೈ ಕಿರುಬೆರಳು ತಾಕಿತಲ್ಲ.. ನನ್ನ ಕಾಲು ಗಡ ಗಡ ನಡುಗಿತೊಮ್ಮೆ.. ಯಾಕೋ ಗೊತ್ತಿಲ್ಲ..!
ಮೊದಲೇ ಹೀಗೆ ನಿನ್ನೆದುರು ನಿಂತಿದ್ದಕ್ಕೆ ನಾಚುತ್ತಿದ್ದೆ. ನೀ ಕೊಟ್ಟ ಫೋಟೋದಲ್ಲಿ ನಾನೇ ಇದ್ದೇನೆ.
ಅರೆ.. ನಾನು ಗದ್ದೆಯಲ್ಲಿ ಕುಣಿಯುವಾಗ ನೀನು ನೋಡಿದ್ದೆ.. ನನ್ನ ಫೋಟೋ ತೆಗೆದಿದ್ದೆ ಎಂದು ತಿಳಿದಾಗ ನಿನ್ನ ಎದುರು ನಿಲ್ಲುವುದಿರಲಿ, ನೀರಾಗಿ ಕರಾಗಬಾರದೇ ಇಲ್ಲೇ ಒಮ್ಮೆ.. ಓಡಿ ಹೋಗಿಬಿಡಲೇ... ಎನಿಸಿತ್ತು.
"ತುಂಬಾ ಚೆನ್ನಾಗಿ ಡಾನ್ಸ್ ಮಾಡ್ತೀರಾ..
ನೀವು ಹುಡ್ಗಿರೆಲ್ಲ ಹೀಗೆನಾ? ಮಳೆ ಅಂದ್ರೆ ಅಷ್ಟು ಹುಚ್ಚಾ? ನಿಮ್ಮಂಥವರನ್ನ ನೋಡಿ ಸಿನೆಮಾ ಮಾಡ್ತಾರಾ ಅಥವಾ ಸಿನೆಮಾ ನೋಡಿ ನೀವು ಹೀಗಾಡ್ತೀರಾ..? "
ಬೇರೆ ಯಾರಾದ್ರೂ ಇಷ್ಟೆಲ್ಲಾ ಮಾತಾಡಿದ್ರೆ ಸೀದಾ ನೆರಿಗೆನಾ ಸೊಂಟಕ್ಕೆ ಸಿಕ್ಕಿಸಿ, ಸೆರಗನ್ನ ಕಟ್ಟಿ ಗಯ್ಯಾಳಿಯ ರೂಪ ತಾಳುವ ನಾನು, ನಿನ್ನ ಮಾತಿಗೆ ತಲೆ ತಗ್ಗಿಸಿಯೇ ಮುಗುಳ್ನಕ್ಕಿದ್ದೆ.
"ಜಾಸ್ತಿ ಕುಣಿಬೇಡಿ, ಮನೆಗ್ಹೋಗಿ.."
ಎಂದು ಹೇಳಿ ಹೊರಟೆಬಿಟ್ಟೆಯಲ್ಲ... ಸರಿಯಾಗಿ ಮುಖವನ್ನೂ ತೋರಿಸದೆ..
ನೀನು ಯಾರು ಏನು ಎಂದೂ ತಿಳಿಯಲಿಲ್ಲ. ಆ ನಂತರ ಎರಡು ಮಳೆಗಾಲ ಕಳೆದವು. ನಿನ್ನ ಸುಳಿವಿಲ್ಲ.
ಹೇ ಅನಾಮಿಕ,
ಕ್ರೂರಿ ನೀನು..
ನನ್ನೊಳಗಿನ ನನ್ನನ್ನು ಅಪಹರಿಸಿದವನೇ..
ಈಗೀಗಂತೂ ಪ್ರತಿ ಹನಿ ಮೈ ಮೇಲೆ ಬಿದ್ದಾಗಲೂ ತಂಪಾಗುವ ಬದಲು, ನಿನ್ನ ನೆನಪ ತರಿಸಿ ಉರಿಸುತ್ತಿವೆ...
ಫೋಟೋ ಕೊಟ್ಟು ಮನಸ್ಸು ಕದಿಯೋದು ಎಂಥ ಸುಲಭದ exchange ಅಂದುಕೊಂಡೆಯಾ?.....
-ಪಲ್ಲವಿ
(ಚಿತ್ರ ನೋಡಿ ಕಲ್ಪಿಸಿದ್ದು... 😉😅)
Friday, July 3, 2020
ಭೋರ್ಗರೆತ
Thursday, July 2, 2020
ಸ್ವಚ್ಛತೆಯ ನೆಪದಲ್ಲಿ ಪುಗಸಟ್ಟೆ ಉಪದೇಶ !!
Wednesday, July 1, 2020
ಬಿಂಬದ ಲೋಕ
(ಗಾಡಿಯ ಕನ್ನಡಿ ಬಳಿ ಕುಳಿತ ಹಕ್ಕಿಯೊಡನೆ ಮಾತುಕತೆ ಹೀಗಿರಬಹುದೆಂಬ ಕಲ್ಪನೆ)
-
ಬೆನ್ನು ಬಾಗಿದರೂ, ದೇಹ ಕೃಶವಾದರೂ ಅವಳಿಗೆ ದಣಿವಾಗದೇ? ಮೈಗೆ ಮುಪ್ಪು, ಮನಕಲ್ಲ!! ಅವಳು ಪ್ರಕೃತಿಯ ಮಡಿಲಲಿ ಸದಾ ನಲಿದಾಡುವ ಕೂಸು.. ಸಹಸ್ರಾರು ಹಸಿರು ಶಿಶ...
-
ತುಂಬಿ ತುಳುಕುತ್ತಿರುವ ಮುಂಬೈ ಲೋಕಲ್ ರೈಲಿನ, ಮಹಿಳೆಯರ ಬೋಗಿಯಲ್ಲಿ ಸಿಕ್ಕ ಪುಟ್ಟ ಪಟಾಕಿ ಇವಳು.. ಅರ್ಧ ಗಂಟೆಯ ಪ್ರಯಾಣದಲ್ಲಿ ಮೊಬೈಲ್ ಲೋಕದಲ್ಲಿ ಮುಳುಗದೇ...
-
ಕವಿತೆ ನಾನು.. ಒಟ್ಟಿಗೇ ಭಾವತುಂಬಿ ಹಾಡಾಗುವ ಬಾ.. ಅಕ್ಷರ ಮಾಸುವ ಮುನ್ನ.. ಇರುಳು ನಾನು.. ಒಟ್ಟಿಗೇ ಶಶಿ-ತಾರೆಯಾಗಿ ಮಿನುಗುವ ಬಾ.. ಬೆಳಕು ಆವರಿಸುವ...
-
ನಮ್ಮೂರ ರಾಮೇಶ ಕೆಲಸ ಕೇಳಿಕೊಂಡು ಎಲ್ಲ ಮನೆಗಳಿಗೆ ಹೋದರೂ ಎಲ್ಲ ಕಡೆಯೂ ಕೆಲಸ ಸಿಗುತ್ತಿರಲಿಲ್ಲ. ಸ್ವಲ್ಪವೇ ಎತ್ತರವಿದ್ದರೂ ಆ ಮರವನ್ನೇರದ, ಚೂರು ಆಳದ ಗುಂ...
-
ಅಪ್ಪನ ಸೈಕಲ್ಲಿನ ಸೀಟನ್ನು ಬಿಗಿಯಾಗಿ ಹಿಡಿದ ಕೈಗಳಿಗೆ ಅದೇನು ಬೇಕಿರಬಹುದು.. ಬಣ್ಣ ಬಣ್ಣದ ಬಲೂನು..? ಊಹುಂ.. ವಿವಿಧಾಕಾರದ ತರಹೇವಾರಿ ಬಣ್ಣದ ಪುಗ್ಗಿಗಳೆಲ್ಲ ತನ್ನ ಹಿಂದ...
-
ಗರಿಯೊಂದು ಮಾತಾಡಿದೆ ಮನಬಿಚ್ಚಿ.... ಹಾಡಿದೆ ಎದೆಯ ಭಾವಗಳ ರಾಗವಾಗಿ... ನೂರು ಎಳೆಗಳಲಿ ಬಣ್ಣವ ಸೂಸಿ, ನಸು ನಾಚಿ... ಅಂಗೈ ನೇವರಿಸಿ ಪಿಸುಗುಟ್ಟಿದೆ ...
-
ಜೀವವೇ.. ಕೇಳು ನೀ ಪುಟ್ಟದೊಂದು ಆಸೆ ಎನಗೆ ಮನೆಯಂಗಳದ ತುದಿಯಲಿ ಬೆಳೆದು ನಿಂತ ಅಚ್ಚಹಸಿರ ಗಿಡದಲಿ ಅರಳಿ ನಿಂತಿವೆ ಮಲ್ಲಿಗೆ.. ಚಳಿಗಾಲದ ಇರುಳಿನಲಿ ಹೊಳೆವ ತಾರೆಗಳಂತೆ!...
-
ಸೀರೆ ಬೇಕೆಂದು ಹೋದೆ ನೀಲಿ ಸೀರೆ, ಝರಿ ಸರಿ ಬರಲಿಲ್ಲ, ಕೆಂಪು ಸೀರೆಗೆ ಅಂಚು ದಪ್ಪ, ಹಸಿರು ಸೀರೆಗೆ ಚಿತ್ತಾರವೇ ಇಲ್ಲ... ಗೆಳೆಯಾ, ನೆರಿಗೆ ಸರಿಪಡಿಸಲು...
-
ಕರ್ನಾಳ ಮಾಸ್ತರು ಸುಮಾರು ಮೂವತ್ತರ ಆಸು ಪಾಸಿನವರು. ಕಿರಾಣಿ ವ್ಯಾಪಾರ ಅವರ ಕೆಲಸವಾದರೂ, ಮಾಸ್ತರರು ಎಂದೇಕೆ ಕರೆಯುವರೆಂದು ಯಾರಿಗೂ ತಿಳಿದಿಲ್ಲ. ಅವರ ಕುಟುಂಬದಲ್ಲಿ ಮೊದಲ...
-
ಸದಾ ಏನನ್ನೋ ಹುಡುಕುತ್ತ ತನ್ನಲ್ಲಿ ತಾನು ಗಲಿಬಿಲಿಗೊಂಡಂತೆ ಕಾಣುವ ಬೆಂಗಳೂರು ನನ್ನಲ್ಲಿ ಬಹಳಷ್ಟು ಬಾರಿ ಬೆರಗನ್ನು ಮೂಡಿಸಿದೆ. ಯಾವುದನ್ನು ಆಚೆ ಹಾಕದೆ ಮೌನವಾಗಿ ಎಲ್ಲವನ...